ಉಂಡೆಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಂಡೆಮೀನು ದೊಡ್ಡ ಮೂಳೆಮೀನು; ಬೆಲೂನಿನಂತೆ ದೇಹವನ್ನು ಉಬ್ಬಿಸಿಕೊಳ್ಳ ಬಲ್ಲುದು; ಉಬ್ಬುಮೀನು ಪರ್ಯಾಯನಾಮ (ಗ್ಲೋಬ್ ಫಿಶ್; ಡಿಯೊಡಾನ್ ಹಿಸ್ಟ್ರಿಕ್ಸ್‌). ಉಷ್ಣ ವಲಯಗಳ ಕರೆನೀರುವಾಸಿ; ಉರುಳೆ ಆಕಾರದ ದೇಹ 30-45ಸೆಂಮೀ. ಉದ್ದ. ಮೈ ತುಂಬ ಉದ್ದನೆಯ ಮೊನಚು ಮುಳ್ಳುಗಳಿವೆ. ದಪ್ಪತಲೆ ಮತ್ತು ಉಬ್ಬು ಹಲ್ಲುಗಳು ಇದರ ವೈಶಿಷ್ಟ್ಯ. ಸಾಧಾರಣ ಮೀನಿನಂತೆಯೇ ಇದು ಸಹ ಜೀವಿಸುತ್ತದೆ. ಆದರೆ ಸ್ವಲ್ಪ ಕೆಣಕಿದಾಗ ಅಥವಾ ಕೆರಳಿಸಿದಾಗ ಗಾಳಿಯಿಂದ ಅಥವಾ ನೀರಿನಿಂದ ತನ್ನ ಹೊಟ್ಟೆ ಅಥವಾ ದೇಹದಲ್ಲಿ ಚೀಲದಂಥ ಒಂದು ಭಾಗವನ್ನು ಉಬ್ಬಿಸಿಕೊಂಡು ಉಂಡೆಯಾಕಾರದಲ್ಲಿ ಅಧೋಭಾಗ ಕಾಣುವಂತೆ ನೀರಿನ ಮೇಲೆ ತೇಲುತ್ತದೆ. ಆಗ ನೇರವಾಗಿ ಎದ್ದುನಿಲ್ಲುವ ಮುಳ್ಳುಗಳು ಇದಕ್ಕೆ ಶತ್ರುವಿನ ವಿರುದ್ಧ ರಕ್ಷಣೆ ನೀಡುತ್ತವೆ. ಈ ಗುಂಪಿಗೆ ಸೇರಿದ ನಾಲ್ಕು ಹಲ್ಲುಗಳುಳ್ಳ ಟೆಟ್ರೋಡಾನ್ ಮತ್ತು ಎರಡು ಹಲ್ಲುಗಳುಳ್ಳ ಡಿಯೊಡಾನ್ ಭಾರತದ ಸುತ್ತಲ ಸಮುದ್ರಗಳಲ್ಲಿ ವಾಸಿಸುವುವು. ಇವನ್ನು ವಸ್ತು ಸಂಗ್ರಹಾಲಯಗಳಲ್ಲಿ ಕಾಣಬಹುದು. ಉಂಡೆಮೀನುಗಳು ವಿಷಪುರಿತವಾದ್ದರಿಂದ ಆಹಾರಯೋಗ್ಯವಲ್ಲ.

ಅರೋತ್ರಾನ್ ಹಿಸ್ಪಿಡಸ್-ಹವಾಯಿ ದ್ವೀಪದಲ್ಲಿ ಕಂಡುಬರುವ ಒಂದು ಪ್ರಭೇದ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: